"Welcome to Shabarinow" Subscribe

Wednesday, July 22, 2015

Hanuman Chalisa One day Discourse by Guruji @ North Karnataka Kudalasangama on 9th August 2015 Sunday, 9am to 6pm



"ಮನುಕುಲದ ಹೃದಯ ಮಂತ್ರ ಹನುಮಾನ್ ಚಾಲೀಸ್"

"ಮನುಕುಲದ ಹೃದಯ ಮಂತ್ರ ಹನುಮಾನ್ ಚಾಲೀಸ್"
ಯವನಿಕ ಸಭಾಂಗಣ ದಲ್ಲಿ ಆಯೋಜಿಸಿದ್ದ ಹನುಮಾನ್ ಚಾಲೀಸ್ ಶಿಬಿರದಲ್ಲಿ ಶ್ರೀ ಶ್ರೀ ರಾಮಚಂದ್ರ ಗುರೂಜಿಯವರು ಹನುಮಾನ್ ಚಾಲೀಸ್ ಬಗ್ಗೆ ವಿವರವಾಗಿ ತಿಳಿಸಿದರು.
ಬೆಂಗಳೂರು: ಆ ಮತ ಈ ಮತ ಎಂದು ಸ್ವಾರ್ಥಕ್ಕಾಗಿ ಬಡಿದಾಡುವವರ ಮಧ್ಯೆ ನಾವೆಲ್ಲರೂ ಹನು-ಮತೇಯರು ಎಂದು ಹೊಸ ಅಲೆಯನ್ನು ಷ್ಟಿಸಿದವರು ಶ್ರೀ ಶ್ರೀ ರಾಮಚಂದ್ರ ಗುರೂಜಿ.ಯವನಿಕ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಒಂದು ದಿನದ ಹನುಮಾನ್ ಚಾಲೀಸ್ ಶಿಬಿರದಲ್ಲಿ ಶ್ರೀ ರಾಮಚಂದ್ರ ಗುರೂಜಿಯವರು ಹನುಮಾನ್ ಚಾಲೀಸ್ ಬಗ್ಗೆ ವಿವರವಾಗಿ ತಿಳಿಸಿದರು.
ತುಳಸೀದಾಸರ ಲಯಬದ್ಧ ಸ್ಫುರಣೆಯೇ ಹನುಮಾನ್ ಚಾಲೀಸ್. ಇದು ಭಾರತೀಯ ಸಂಸ್ಕೃತಿಯಲ್ಲಿಯೇ ಪ್ರಥಮ ಮಂತ್ರ ಹಾಗೂ ಪ್ರಥಮ ಪೂಜಿತ ಹನುಮಾನ್ ಎಂಬ ವಿಚಾರವನ್ನು ಜನರ ಮುಂದಿಡುತ್ತಾ ಎಲ್ಲರ ಚಿತ್ತವನ್ನು ತನ್ನೆಡೆಗೆ ಸೆಳೆದು ಹನುಮನ ಜೀವನದ ಬಗ್ಗೆ ತಿಳಿಸಿದರು.ಒಬ್ಬ ವ್ಯಕ್ತಿ ತನ್ನಲ್ಲಿರುವ ದ್ವೇಷವನ್ನು ತೊರೆದು ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ಸಮೃದ್ಧಿಯಿಂದ ಜೀವನ ನಡೆಸಿ ಬದುಕನ್ನು ಸಾರ್ಥಕಪಡಿಸಿಕೊಳ್ಳಲು ಇರುವ ಮನು ಕುಲದ ಹೃದಯ ಮಂತ್ರ ಹನುಮಾನ್ ಚಾಲೀಸ್. ಎಲ್ಲಾ
ಮಂತ್ರಗಳು ಮನಸ್ಸಿಗೆ ಸಂಬಂಧಿಸಿದ್ದಾದರೆ ಇದು ಹೃದಯಕ್ಕೆ ಸನಿಹವಾದದ್ದು, ಹನುಮನ ನಿವಾಸ ಹೃದಯ ಎಂದು ವಿವರಿಸಿದರು.
ಮಾನವನ ಆನಂದದ ಮಂತ್ರ
ಹನುಮಾನ್ ಚಾಲೀಸ್ ಮಂತ್ರವು ಲಯಶ್ರೇಷ್ಠತೆ ಹೊಂದಿರುವ ಆಕರ್ಷಕ ಶಬ್ದಪುಂಜ. ಮಕ್ಕಳಿಗೆ ಭಯನಿವಾರಕ ಮಂತ್ರ, ಯುವಪೀಳಿಗೆಗೆ ಶಕ್ತಿ ಮಂತ್ರ,ಮೋಕ್ಷಾಕಾಂಕ್ಷಿಗಳಿಗೆ ದಿವ್ಯಮಂತ್ರ, ಒಟ್ಟಾರೆ ಮಾನವನ ಆನಂದಧಾಮದ ರಹಸ್ಯತಮ ಮಂತ್ರವಾಗಿದೆ ಎಂದು ಬಣ್ಣಿಸಿದರು.
ಹನುಮಾನ್ ಚಾಲೀಸ್ ಐತಿಹಾಸಿಕ, ಚಾರಿತ್ರಿಕ, ಆಧ್ಯಾತ್ಮಿಕ ಪರಿಕಲ್ಪನೆ, ಅನುಭವಾತ್ಮಕ ಭಾವ ಸ್ಪಂದನವಾಗಿದೆ. ಸಂಕುಚಿತ ಮನೋಭಾವದಿಂದ ವಿಶಾಲತೆಯೆಡೆಗೆ ಕರೆದೊಯ್ಯುವ,ಅಜ್ಞಾನದಿಂದ ಆತ್ಮಜ್ಞಾನದ ಕಡೆಗೆ ಪರಿವರ್ತಿಸುತ್ತದೆ. ಪೌರಾಣಿಕ ಹಾಗೂ ಐತಿಹಾಸಿಕ ಮಹತ್ವ ಸಾರುತ್ತದೆ ಎಂದು ಹೇಳಿದರು.
www.youtube.com/shabari24x7
www.shabarinow.blogspot.in